Wednesday 24 May 2017

ವಚನಾಮೃತ -3

ಸಂತನ ಹುಡುಕುವುದೇಕಯ್ಯ
ಸಾದುವ ಕಾಣುವ ಹಂಬಲವೇಕಯ್ಯ
ಸಜ್ಜನರ ಸಲಹೆಯು ಯಾತಕೆ ಅಯ್ಯ..?
ಆತ್ಮ ಶುದ್ಧಿಯ ಹೊರತು
ಸುಕಾರ್ಯ ಮಾಡದ ಹೊರತು
ಮರಕ್ಕೆ ಗಾಳಿ ನೀರು ಬೆಳಕು ಎಷ್ಟಿದ್ದರೇನಯ್ಯ
ಕೊಳೆತ ಬೇರು ಇದ ಪಡೆವುದೇ ಅಯ್ಯ

ಕವಿ ಮತ್ತು ಕುಡುಕ (ಕವನ)

ಕವಿ ಮತ್ತು ಕುಡುಕ

ಕುಡುಕನೊಬ್ಬ ಅಕಸ್ಮಿಕದಿ
ಕವಿಸಮ್ಮೇಳಕೆ ಬಂದು ಕುಳಿತಿರಲು...

ಆಲಿಪನು ಕವಿಗಳ ಕವನ ವಾಚನವ 
ಪ್ರೀತಿ ಪ್ರೇಮ ಪ್ರಣಯಾಲಾಪಗಳ..

ವೇದ ತತ್ವ ಷಟ್ಪದಿಯ ರಾಗದಲಿ ತೇಲಿ ತೇಲಿ
ಅಲಂಕಾರಿಕ ಸಾಲುಗಳಲಿ ಮುಳುಗಿ ಹೋಗಿ...

ಉಪಮೆ ಉಪಮಾನಗಳಲಿ ಸುಳಿ ಸುಳಿದು
ತಲೆಯು ಕವನಗಳಲಿ ತಿರುಗಿ ತಿರುಗಿ....

ಸತ್ವ ಹೀನ ಸಾಲುಗಳೆಂದನವನು ಕೇಳುತಲಿ
ಅನುಭಾವದ ಸಾಲು ಸಿಗುವುದೆಂದನು ಬಾರಿನಲಿ...

ನಿಮ್ಮದು ನಕಲಿ ಮಾತಿನ ಮೋಡಿ
ನಮ್ಮದು ಅಸಲಿ ತೊದಲ ನುಡಿ...

ನಮ್ಮದು ಸರಾಗ ಯೋಚನೆಗಳು
ನಿಮ್ಮವು ಕಟ್ಟಿ ಕುಟ್ಟಿದ ಆಲಾಪನೆಗಳು...

ತೊದಲಿದರೂ ನೇರ ನುಡಿಗಳೆಮ್ಮವು
ತೊದಲದಿದ್ದರೂ ಸೊಟ್ಟ ಮಾತುಗಳು ನಿಮ್ಮವು..

ಕೋಪದಿ ಕವಿಯು ಹೊರ ದಬ್ಬಿದ ಕುಡುಕನ
ಅಲ್ಲಿಂದಲೇ ಕುಡುಕ ಒದರಿದನು ಕವಿ ಪುಂಗಕೆ...

ರವಿ ಕಾಣದ್ದನು ಕವಿ ಕಂಡ
ಕವಿ ಕಾಣದ್ದನು ಕುಡುಕ ಕಂಡ...

     -    ಪ್ರಕಾಶ್ ಎನ್ ಜಿಂಗಾಡೆ

ನಾಯಕರಿವರು (ಕವನ)

ನಾಯಕರಿವರು

ಗಾಂಧಿ ಪ್ರತಿಮೆಯ ನಿಲ್ಲಿಸಿಹರು
ಅಂಬೇಡ್ಕರ್ ಪಟವ ಹಾಕಿಹರು
ವಲ್ಲಭ ಪಟೇಲ್, ಸುಭಾಷ್, ಚಂದ್ರ ಶೇಖರರ
ಸಂಗೊಳ್ಳಿ, ಝಾನ್ಸಿ, ಚೆನ್ನಮ್ಮರಾಣಿಯರನೇಕರ
ಶಾಲೆಲಿ ಪಾಠವ ಓದಿದ ನೆನಪಲಿ
ಬಾಯಲಿ ಭಾಷಣ ಬಿಗಿಯುವರು..

ಗಾಂಧಿ ಸುಭಾಷರ ವೇಷವ ಧರಿಸಿ
ತಮ್ಮಯ ಕಾರ್ಯವ ಮರೆತಿಹರು.
ಜನರ ಕಿವಿಯಲಿ ಪಿಳ್ಳಂಗೋವಿಯ ಊದಿ
ಲಂಚದ ಬಾಗಿಲಲಿ ಭಟ್ಟಂಗಿಗಳಾಗಿ
ಹಿಂದಿನ ಸಾಧನೆ ಮಾತ್ರವೇ ಹೊಗಳುತ
ಸುಮ್ಮನೆ ಕಾಲವ ನೂಕಿಹರು...

ಹಸಿವಿನ ಉದರವು ತಂಬಲೇ ಇಲ್ಲ
ಬಾಯಾರಿದ ನಾಲಿಗೆ ತಣಿಯಲೇ ಇಲ್ಲ
ಬಾಂಬು ಸಿಡಿ ಮದ್ದುಗಳ ಸದ್ದು ಅಡಗಲೇ ಇಲ್ಲ
ಶ್ರಮಿಕನ ಬವಣೆ ತೀರಲೂ ಇಲ್ಲ
ಮಂತ್ರಿಯ ನಿದ್ದೆ ಮುಗಿಯಲೇ ಇಲ್ಲ
ನಿದ್ದೆಯ ನಿಧಾನ ಸೌಧದಲಿ...

ಗಾಂಧಿ ಹೋರಾಟದ ನೆಪದಲೆ ನಡೆಯುತ
ತಾವೇ ಸ್ವತಂತ್ರ ತಂದವರಂತೆ ಬೀಗುತ
ಅವರಿಟ್ಟ ಹೆಜ್ಜೆಯ ಇಂಚಿಗೂ ಸುಳಿಯದೇ
ವರ್ತಮಾನದ ಸ್ಥಿತಿ ಗತಿಯನು ಅರಿಯದೆ
ಸ್ವಾರ್ಥದಿ ದಾರಿಯ ಸೆವೆಸುವರು
ಅಧಿಕಾರದ ಅರ್ಥವ ತಿಳಿಯರು..

             ಪ್ರಕಾಶ್ ಎನ್ ಜಿಂಗಾಡೆ

Sunday 21 May 2017

ವಚನಾಮೃತ -4

ಅಂಗೈಯಲ್ಲಿರುವ ದರ್ಪಣವು
ಮುಖದ ಕಲೆಯ ತೋರಿದೊಡೆ
ದರ್ಪಣವ ಹೊಡೆದು ಹಾಕುವೆವೇ ಅಯ್ಯ...?
ಕಲೆಯ ಹೋಗಲಾಡಿಸಿ
ಸೌಂದರ್ಯ ಕಾಪಾಡಿಕೊಳ್ಳುವುದಲ್ಲದೇ
ಮತ್ತೇನು ಮಾಡುವೆವಯ್ಯಾ.....?

ಸಂಗನೊಬ್ಬ....ಬಂಧುವೊಬ್ಬ...
ಡೊಂಕುಗಳ ತೋರಿದೊಡೆ
ಕೋಪಿಸಿಕೊಳ್ಳುವುದು ಸರಿಯೇ ಅಯ್ಯ..?
ಅಂತರಂಗದ ಡೊಂಕನ್ನು ತೊರೆದು
ಆತ್ಮ ಶುದ್ಧಿ ಮಾಡಿಕೊಳ್ಳದೇ
ಮತ್ತೊಂದನು ಮಾಡುವುದೇಕಯ್ಯ.....?

              - ಪ್ರಕಾಶ್ ಎನ್ ಜಿಂಗಾಡೆ

Friday 5 May 2017

ಬಡವಳು (ಕವನ)

ಕಂಬನಿಯೊಳು ಮಿಂದೆದ್ದು
ರೆಪ್ಪಯಂಚಿಲಿ ಹನಿಯನು ಬಚ್ಚಿಟ್ಟು
ಸೆರಗಲಿ ನೋವ ಮಡಿಸಿಟ್ಟು
ಬದುಕ ಸವೆಸುತಿಹಳು...

ನಲಿವೆಂಬ ಮರೀಚಿಕೆ ಕಾಣುತ
ಅನುದಿನದಿ ಜೀವವ ತೇಯುತ 
ಪಶು ಸಮಾನ ಕಾಯಕ ಮಾಡುತ
ಬವಣೆಯ ಭವದೊಳು ತನ್ನನೇ ಮರೆತಿಹಳು
 
            -ಪ್ರಕಾಶ್ ಎನ್ ಜಿಂಗಾಡೆ

ನಾಯಕರಿವರು (ಕವನ)

ನಾಯಕರಿವರು

ಗಾಂಧಿ ಪ್ರತಿಮೆಯ ನಿಲ್ಲಿಸಿಹರು
ಅಂಬೇಡ್ಕರ್ ಪಟವ ಹಾಕಿಹರು
ವಲ್ಲಭ ಪಟೇಲ್, ಸುಭಾಷ್, ಚಂದ್ರ ಶೇಖರರ
ಸಂಗೊಳ್ಳಿ, ಝಾನ್ಸಿ, ಚೆನ್ನಮ್ಮರಾಣಿಯರನೇಕರ
ಶಾಲೆಲಿ ಪಾಠವ ಓದಿದ ನೆನಪಲಿ
ಬಾಯಲಿ ಭಾಷಣ ಬಿಗಿಯುವರು..

ಗಾಂಧಿ ಸುಭಾಷರ ವೇಷವ ಧರಿಸಿ
ತಮ್ಮಯ ಕಾರ್ಯವ ಮರೆತಿಹರು.
ಜನರ ಕಿವಿಯಲಿ ಪಿಳ್ಳಂಗೋವಿಯ ಊದಿ
ಲಂಚದ ಬಾಗಿಲಲಿ ಭಟ್ಟಂಗಿಗಳಾಗಿ
ಹಿಂದಿನ ಸಾಧನೆ ಮಾತ್ರವೇ ಹೊಗಳುತ
ಸುಮ್ಮನೆ ಕಾಲವ ನೂಕಿಹರು...

ಹಸಿವಿನ ಉದರವು ತಂಬಲೇ ಇಲ್ಲ
ಬಾಯಾರಿದ ನಾಲಿಗೆ ತಣಿಯಲೇ ಇಲ್ಲ
ಬಾಂಬು ಸಿಡಿ ಮದ್ದುಗಳ ಸದ್ದು ಅಡಗಲೇ ಇಲ್ಲ
ಶ್ರಮಿಕನ ಬವಣೆ ತೀರಲೂ ಇಲ್ಲ
ಮಂತ್ರಿಯ ನಿದ್ದೆ ಮುಗಿಯಲೇ ಇಲ್ಲ
ನಿದ್ದೆಯ ನಿಧಾನ ಸೌಧದಲಿ...

ಗಾಂಧಿ ಹೋರಾಟದ ನೆಪದಲೆ ನಡೆಯುತ
ತಾವೇ ಸ್ವತಂತ್ರ ತಂದವರಂತೆ ಬೀಗುತ
ಅವರಿಟ್ಟ ಹೆಜ್ಜೆಯ ಇಂಚಿಗೂ ಸುಳಿಯದೇ
ವರ್ತಮಾನದ ಸ್ಥಿತಿ ಗತಿಯನು ಅರಿಯದೆ
ಸ್ವಾರ್ಥದಿ ದಾರಿಯ ಸೆವೆಸುವರು
ಅಧಿಕಾರದ ಅರ್ಥವ ತಿಳಿಯರು..

             ಪ್ರಕಾಶ್ ಎನ್ ಜಿಂಗಾಡೆ

Thursday 4 May 2017

ಸೆಳೆತ

ಪ್ರೀತಿ ಪ್ರೇಮ ಬರಿಯ ಕಾಲಹರಣ
ಅಸಮಂಜಸದ ಬರಿಯ ಭಾವ ಪಯಣ
ಎಂಬ ದೃಢ ನಿಶ್ಚಯದಿ ಸಾಗಿದರೂ
ಹಾದಿಯಲಿ ಸಾಗಿಹ ತೆಳು ನಡು ಕನ್ಯೆಯ ಕಂಡು
ಹೃದಯದಿ ಬಡಿತ ಹೆಚ್ಚಿಹುದು...

ಆದ್ಯಾವ ನೋಟವೋ ಮೋಡಿಯ ಮಾಡಿಹುದು
ಅದ್ಯಾವ ಮಂತ್ರವೋ ನನ್ನಯ ಸೆಳೆದಿಹುದು
ಅವಳ ಗುಳಿಕೆನ್ನೆಯ ಸುಳಿಯಲಿ ತಿರು ತಿರುಗಿ
ಮುಂಗುರುಳ ಜೋಲಿಯಲಿ ಜಿಗಿ ಜಿಗಿದು
ಮನಸು ಉಯ್ಯಾಲೆಯಾಗಿ ಮೀಟುತಿಹದು...

ಪೃಥುವಿ ದ್ರುವಗಳಾಕರ್ಷಣೆ ಸೊರಗಿಹುದು
ಹೆಣ್ಣೆಂಬ ಸಹಜ ಆಕರ್ಷಣೆಯಲಿ
ಗಂಡು ಹೆಣ್ಣೆಂಬ ನಿಸರ್ಗ ನಿಯಮದಲಿ
ಪ್ರಕೃತಿ ಪುರುಷ ಸೋತಿಹನು
ಸಹಜ ಸ್ತ್ರೀಯ ಸೆಳೆತದಲಿ ...