Wednesday 24 May 2017

ಕವಿ ಮತ್ತು ಕುಡುಕ (ಕವನ)

ಕವಿ ಮತ್ತು ಕುಡುಕ

ಕುಡುಕನೊಬ್ಬ ಅಕಸ್ಮಿಕದಿ
ಕವಿಸಮ್ಮೇಳಕೆ ಬಂದು ಕುಳಿತಿರಲು...

ಆಲಿಪನು ಕವಿಗಳ ಕವನ ವಾಚನವ 
ಪ್ರೀತಿ ಪ್ರೇಮ ಪ್ರಣಯಾಲಾಪಗಳ..

ವೇದ ತತ್ವ ಷಟ್ಪದಿಯ ರಾಗದಲಿ ತೇಲಿ ತೇಲಿ
ಅಲಂಕಾರಿಕ ಸಾಲುಗಳಲಿ ಮುಳುಗಿ ಹೋಗಿ...

ಉಪಮೆ ಉಪಮಾನಗಳಲಿ ಸುಳಿ ಸುಳಿದು
ತಲೆಯು ಕವನಗಳಲಿ ತಿರುಗಿ ತಿರುಗಿ....

ಸತ್ವ ಹೀನ ಸಾಲುಗಳೆಂದನವನು ಕೇಳುತಲಿ
ಅನುಭಾವದ ಸಾಲು ಸಿಗುವುದೆಂದನು ಬಾರಿನಲಿ...

ನಿಮ್ಮದು ನಕಲಿ ಮಾತಿನ ಮೋಡಿ
ನಮ್ಮದು ಅಸಲಿ ತೊದಲ ನುಡಿ...

ನಮ್ಮದು ಸರಾಗ ಯೋಚನೆಗಳು
ನಿಮ್ಮವು ಕಟ್ಟಿ ಕುಟ್ಟಿದ ಆಲಾಪನೆಗಳು...

ತೊದಲಿದರೂ ನೇರ ನುಡಿಗಳೆಮ್ಮವು
ತೊದಲದಿದ್ದರೂ ಸೊಟ್ಟ ಮಾತುಗಳು ನಿಮ್ಮವು..

ಕೋಪದಿ ಕವಿಯು ಹೊರ ದಬ್ಬಿದ ಕುಡುಕನ
ಅಲ್ಲಿಂದಲೇ ಕುಡುಕ ಒದರಿದನು ಕವಿ ಪುಂಗಕೆ...

ರವಿ ಕಾಣದ್ದನು ಕವಿ ಕಂಡ
ಕವಿ ಕಾಣದ್ದನು ಕುಡುಕ ಕಂಡ...

     -    ಪ್ರಕಾಶ್ ಎನ್ ಜಿಂಗಾಡೆ

No comments:

Post a Comment