Wednesday 20 September 2017

ಬಿಸಿ ಚಹ...

ಬಿಸಿ ಚಹ...

ಅದ್ಯಾರು ಹೇಳಿದ್ದರೊ
ಗಿಡದ ಎಲೆಯೊಂದನಂ ಹುಡಿಯಾಡಿಸಿ
ಕುದಿಸಿ ಸುವಾಸನಾ ಬಿಸಿ ಪಾನಂ ತಯಾರಿಸಿ
ಪ್ರಾತಃ ಕಾಲದಿ ಉದರಕೆ ಹಾಕಿ
ದಿನದ ಕಜ್ಜಕೆ ಸನ್ನದ್ಧಗಳಿಸಲು...

ನೀರಿಕ್ಷೆಗಳೊಂದಿಗೆ ಧಾಳಿಯಿಟ್ಟ
ಬಂಧುವಂ ತಣಿಸುವ ಪಾನರಸವಿದು
ಸ್ನೇಹಕ್ಕೆ ಪ್ರೀತಿಗೆ ರಾಯಭಾರಿಯಿದು
ಸಾಮರಸ್ಯದಿ ಮಧುರ ಹಿತವನೀಯುದು
ಅಮೃತ ಪಾನವಿದು ಹೊಸ ದಿನಕೆ ನಾಂದಿಯಿದು...

ವಧು ಶಾಸ್ತ್ರದಿ ವರನಂ ಸೆಳೆದುದು
ತಾಣದಲಿ ಪ್ರೇಮಿಗಳಂ ಬೆರೆಸಿದುದು
ಅಜ್ಞಾತ ಜನರ ಜ್ಞಾತರಂ ಮಾಡಿದಿದು
ಸರ್ವರಂ ಸರ್ವತ್ರಂ ಸ್ವಾದವೀಯುವುದು
ಬಿಸಿ ಪಾನಂ... ಎನ್ನ ಮನ ರಸಂ..

ವ್ಯವಹಾರದಲಿ ಕುಚ್ಯೋದ್ಯಂ ಬೆರೆಸಿ
ಮಂದಹಾಸದಿ ಬಿಸಿ ಚಹವಂ ತರಿಸಿ
ಪಾನದ ನೆಪದಲಿ ಮೋಸವ ತೋರಿಸಿ
ಮಾಡಿಹರು ದ್ರೋಹಂ ಕಪಟ ನಾಟಕಂ
ಚಹದಲೂ ಸ್ವಾರ್ಥಂ ಬಿಡನ್ ಈ ನರನ್...

                 -ಪ್ರಕಾಶ್ ಎನ್ ಜಿಂಗಾಡೆ

No comments:

Post a Comment