Wednesday 20 September 2017

ಓಡಿ ಹೋದವರು...

ಓಡಿ ಹೋದವರು...

ಅವನು ಜಿಂಗಿಲಾಲ ಉಡುಪಿನಲಿ ಜಗಮಗ
ಇವಳು ಸುಪನಾತಿ ಸೀರೆಯಲಿ ಮಿರ ಮಿರ
ಏನೋ ಸೆಳೆತ ಇಬ್ಬರಲೂ
ಹೊರಟಿದ್ದು ಇಂದ್ರನೂರಿಗೆ ಕನಸ ಹೊತ್ತು
ಪ್ರಾಯದ ಲೇಖನಿ ಹಿಡಿದು
ಕಾಣದೂರಿನಲಿ ಕಾವ್ಯ ಬರೆಯಲು
ಒಲವ ತೋಳಿನಲಿ ಗೀತಯೊಂದನು ಹಾಡಲು.....

ಎಲ್ಲವನು ಮರೆತರು ಕ್ಷಣ ಕಾಲ
ತುತ್ತು ನೀಡಿದವರು ನೆನಪಾಗಲಿಲ್ಲ
ಕೂಸುಮರಿ ಹೊತ್ತವರು ಕಾಣಲಿಲ್ಲ
ಕೂಳನ್ನ ಹಂಚಿಕೊಂಡವರೂ ಅರಿವಿಗೆ ಬರಲಿಲ್ಲ
ಮರೆತರು ಮರೆತೇ ಹೋದರು
ಪ್ರಣಯ ಗೀತೆ ಹಾಡಿದರು
ಬಿಸಿಲಿನ ತಾಪ ಇಳಿಯುವ ತನತ.....

ಕೃಷ್ಣ ರಾಧೆಯರ ಪ್ರೇಮ ಪೂಜಾರ್ಹ
ದುಷ್ಯಂತ ಶಾಕುಂತಲೆಯರದ್ದುರದು ನಿರ್ಮಲ
ಷಹಜಾನ್ ಮುಮ್ತಾಜ್ ರದ್ದು ಐತಿಹಾಸಿಕ
ಹೇಳದಿರಿ ಅವರ ಹೆಸರುಗಳನು
ಅಂತಹ ನಿಷ್ಠೆಯಿದೆಯೇ ನಿಮ್ಮಲಿ
ಬದುಕಿ ತೋರುವ ಛಲವಿದೆಯೇ ನಿಮ್ಮಲಿ
ಇಲ್ಲವಾದರೆ ನನ್ನದೂಂದು ದಿಕ್ಕಾರ ವಿರಲಿ...

                    - ಪ್ರಕಾಶ್. ಎನ್. ಜಿಂಗಾಡೆ

No comments:

Post a Comment