ಪ್ರಕಾಶ್ ಜಿಂಗಾಡೆಯವರ ಲೇಖನಿಯಲ್ಲಿ ಮೂಡಿದ...... ಹೊಸ ಕತೆಗಳು...... ಹೊಸ ಚಿಂತನೆಗಳು....
Wednesday, 29 June 2016
Monday, 20 June 2016
ನಮ್ಮೂರು
ನಮ್ಮೂರು
ಬಸವನೊಮ್ಮೆ ಹೂಂಕರಿಸಿ ಗೂಳಿಟ್ಟಿಸಿ
ಆಶೕಿರ್ವದಿಸಿದ ಪುಣ್ಯಭೂಮಿಯೇ
ನಮ್ಮೂರು ಬಸವಾಪಟ್ಟಣ
ಪಟ್ಟಣವೆಂಬುದು ಅನ್ವರ್ಥನಾಮ ಅಷ್ಟೇ
ಗಗನಚುಂಬಿ ಕಟ್ಟಡಗಳೇನೂ ಇಲ್ಲ
ವಿಶಾಲ ಹೃದಯಗಳಿಗೇನೂ ಕೊರತೆ ಇಲ್ಲ
ಮೂರು ಕಡೆ ಸುತ್ತಲೂ ಬೆಟ್ಟಗಳು
ಬೆಟ್ಟಕ್ಕೆ ಮುತ್ತಿಕ್ಕಿ ಹರಿಯುವ ಭದ್ರಾನಾಲೆ
ವೈವಿದ್ಯದ ರಾಜಬೀದಿಯಲಿ ಕಾಲಿಟ್ಟರೆ
ಕೋಶ ಓದುವುದೇನೂ ಬೇಡ
ಅಲ್ಲಿಯ ತರಲೇ ಮಾತುಗಳು
ಸೋಮಾರಿ ಕಟ್ಟೆಯ ಚರ್ಚೆಗಳೇ ಸಾಕು...
ಹಾಲಸ್ವಾಮಿ ಬೆಟ್ಟದ ಹಿತನುಡಿಗಳು
ದುರ್ಗಮ್ಮ ಗುಡ್ಡದ ವೇದಾಂತಗಳು
ಜನರ ಐಲು ಬೈಲು ರಾಜಕೀಯ ನುಡಿಗಳು
ರಾಜಧಾನಿಯಲ್ಲೂ ಸಿಗಲಾರದ ಸಿದ್ಧಾಂತಗಳು
ಕುಡುಕರು ಅಭಿನಯದ ಸಂಜೆ ಬೀದಿಗಳು
ಬಿಳಿ ಲುಂಗಿ ಪರದೆಯಲ್ಲಿನ ಟೆಂಟ್ ಸಿನಿಮಾಗಳು
ದಿನದ ದುಡಿಮೆ ಇಲ್ಲದಿದ್ದರೂ ಚಿಂತೆಯಿಲ್ಲ
ಪಕ್ಕದ ಮನೆಯ ಕಡ ಇದ್ದೇ ಇದೇ
ಕೂಡಿ ಬದುಕುವ ಕಲ್ಚರ್ ಇದೆ
ಇಲ್ಲಿನಂತೆ ಮೋಸದ ಜಾಲವಿಲ್ಲ
ಕಳ್ಳ ಬಂದರೂ ಚಿಂತೆಯಿಲ್ಲ
ಅಲ್ಲೇ ಡ್ರಾ ಅಲ್ಲೇ ಬಹುಮಾನ...
ವೈಫೈ ಯುಗದಲ್ಲೂ ಹೈಫೈ ಆಗಲಿಲ್ಲ
ಸಂಸ್ಕೃತಿ ಸಂಸ್ಕಾರಕ್ಕೆ ಆಧುನಿಕತೆ ಸಿಗಲಿಲ್ಲ
ಇಂಗ್ಲಿಷಿನ ಭಾಷೆ ನಾಲಿಗೆಗೆ ಬರಲಿಲ್ಲ
ಅದೇ ಜನ, ಅದೇ ಮನ
ಪ್ರೀತಿ ವಿಶ್ವಾಸದ ಆರಾಧಕರು
ದೇವರ ಪ್ರತಿನಿಧಿಗಳು....
- ಪ್ರಕಾಶ್.ಎನ್.ಜಿಂಗಾಡೆ
Wednesday, 15 June 2016
ಕನಸುಗಳು
ಅಂತ ಗೋಗರೆಯುತ್ತಿದ್ದಳಂತೆ. ಆ ಕನಸು ಅಷ್ಟೇ. ಅದನ್ನು ಕನಸು ಅಂತಾನೆ ಪರಿಗಣಿಸಿದ ನನ್ನ ಸ್ನೇಹಿತ ಅಷ್ಟಕ್ಕೆ ಸುಮ್ಮನಾಗಿ ಬಿಟ್ಟನು. ಒಂದೆರಡು ದಿನಗಳ ನಂತರ ಕನಸಿನಲ್ಲಿ ಕಂಡ ಆ ಹುಡುಗಿಯನ್ನು ಯಾರೋ ಸಾಯಿಸಿ ಬಿಟ್ಟಿದ್ದರು. ಆಕೆ ಕನಸಿನಲ್ಲಿ ಹೇಳಿಕೊಂಡಂತೆ ತುಂಬಾ ತೊಂದರೆಯಲ್ಲಿ ಸಿಲುಕಿದ್ದಳು. ನನ್ನ ಸ್ನೇಹಿತ ಈ ಘಟನೆ ಹೇಳಿದ ಮೇಲೆ ಕನಸನ್ನು ಕನಸಿನಂತೆಯೇ ಕಾಣುತ್ತಿದ್ದ ನನಗೆ ಕನಸಿನ ಬಗ್ಗೆ ಸ್ವಲ್ಪ ವಿಶೇಷ ಆಸಕ್ತಿ ಮೂಡಲಾರಂಭಿಸಿತು....
ಆ ವಿಷಯ ನನ್ನ ಕಿವಿಗೂ ಬಿತ್ತು ನಾನು ನಕ್ಕು ಸುಮ್ಮನಾದೆ.
ವಾಸ್ತವವಾಗಿ ಸಾಧ್ಯವಾಗದ ಎಷ್ಟೋ ವಿಷಯಗಳನ್ನು ನಾವು ನಮ್ಮ ಕನಸಿನಿಂದ ಈಡೇರಿಸಿಕೊಳ್ಳುತ್ತೇವೆ. ನನ್ನ ಮೇಲಿನ ಕೋಪವನ್ನು ಆ ವಿಧ್ಯಾರ್ಥಿ ಕನಸಿನ ಮೂಲಕ ಈಡೇರಿಸಿಕೊಂಡು ಮಾನಸಿಕ ಸಮತೋಲನವನ್ನು ಕಾಯ್ದು ಕೊಳ್ಳುತ್ತಾನೆ. ಮಾನಸಿಕ ಸಮತೋಲನವನ್ನು ಕಾಯ್ದು ಕೊಳ್ಳಲು ಕನಸುಗಳು ಎಷ್ಟೋ ಸಹಾಯ ಮಾಡುತ್ತವೆ. ಕನಸು ಕಾಣದ ವ್ಯಕ್ತಿ ಮಾನಸಿಕ ಅಸಮತೋಲನದಿಂದ ಇದ್ದಾನೆ ಎಂದಾರ್ಥವಲ್ಲ. ಪ್ರತಿಯೊಬ್ಬರೂ ಕನಸನ್ನು ಕಂಡೇ ಕಾಣುತ್ತಾರೆ. ಕನಸು ಕಾಣಲಿಲ್ಲವೆಂದರೆ ಮನುಷ್ಯ ಹುಚ್ಚನಾಗುತ್ತಾನೆ. ಆದರೆ ನಾವು ಕಂಡ ಎಷ್ಟೋ ಕನಸುಗಳು ನಮ್ಮ ನೆನಪಿಗೆ ಬರುವುದೇ ಇಲ್ಲ. ಶೇಕಡ ತೊಂಬತ್ತರಷ್ಟು ಕನಸುಗಳು ನೆನಪಿಗೆ ಬಾರದೇ ಹಾಗೆಯೇ ಜಾರಿ ಹೋಗಿ ಬಿಡುತ್ತವೆ. ಒಬ್ಬ ಮನುಷ್ಯ ತಮ್ಮ ಜೀವಿತವಧಿಯಲ್ಲಿ ಆರು ವರ್ಷಕ್ಕಿಂತ ಹೆಚ್ಚಿನ ಅವಧಿಯಷ್ಟು ಕನಸು ಕಾಣುತ್ತಾನಂತೆ. ಕನಸುಗಳು ನಮ್ಮ ಮನಸ್ಸನ್ನು ಸ್ವಾಸ್ಥ್ಯವಾಗಿಡುತ್ತವೆ. ನಾವು ಕಾಣುವ ಕನಸುಗಳು ಭಯಂಕರವೋ ಅಥವಾ ವಿಚಿತ್ರವೋ ಆಗಿದ್ದರೆ. ಅದಕ್ಕೆ ಕೆಲವು ಘಟನೆಗಳು ಕಾರಣವಾಗಿರಬಹುದು. ಕನಸುಗಳು ನಮ್ಮ ಜೀವನದಲ್ಲಿ ನಡೆದ ಘಟನೆಗಳ ಪ್ರತಿಬಿಂಬಗಳು. ಮೆದುಳಿನ ಮೂಲೆಯಲ್ಲಿ ಸ್ತಪ್ತವಾಗಿರುವ ಇಂತಹ ಘಟನಾವಳಿಗಳು ಆಗಾಗ ಕನಸಿನ ರೂಪದಲ್ಲಿ ಮರುಕಳಿಸಬಹುದು.....
ಇರುವ ಅಲ್ಪ ಸ್ವಲ್ಪ ಹಣದಿದಂಲೇ ಫೈನಾನ್ಸ ಆರಂಭಿಸಿದೆವು. ಅದರೆ ನನ್ನ ಈ ಗೆಳೆಯರು ಬಂಡವಾಳ ಹಾಕಿ ವ್ಯವಹಾರ ಬೆಳೆಸುವ ಬದಲು. ತಮ್ಮ ತಮ್ಮ ಸಂಬಂದಿಕರನ್ನು ಕರೆದುಕೊಂಡು ಬಂದು ತಾವು ಮಾಡಿದ ವೈಯುಕ್ತಿಕ ಸಾಲಗಳಿಗೆ ಕಂಪನಿಯಿಂದ ಸಾಲ ಪಡೆದ ಹಾಗೆ ಪತ್ರಗಳನ್ನು ತಯಾರಿಸಿ ಅವರಿಗೆ ಹಣ ನೀಡುತ್ತಿದ್ದರು. ಫೈನಾನ್ಸ್ ವ್ಯವಹಾರವನ್ನು ನೋಡಿಕೊಳ್ಳುವ ಜವಬ್ದಾರಿ ಸಂಪೂರ್ಣ ನನಗೆ ವಹಿಸಲಾಗಿತ್ತು. ಫೈನಾನ್ಸ್ ನಲ್ಲಿ ಕೂರುವುದು ಲೆಕ್ಕಾಚಾರವನ್ನೆಲ್ಲಾ ಬರೆಯುವುದು ನಾನೇ ನಿರಿವಹಿಸುತ್ತಿದುದರಿಂದ ಸಾರ್ವಜನಿಕರೆಲ್ಲಾ ಫೈನಾನ್ಸ್ ನನ್ನದೇ ಎಂದು ನಂಬಿದ್ದರು. ಇಂತವರ ಸಹಭಾಗಿತ್ವದಿಂದ ಫೈನಾನ್ಸ್ ಮುಳುಗುವ ಹಂತಕ್ಕೆ ಬಂದಿತ್ತು. ಜನರ ಷೇರ್ ಹಣ ಬೇರೆ ನಮ್ಮ ಮೇಲಿತ್ತು. ನಾನು ಒಂದು ರೀತಿಯಲ್ಲಿ ಯಾರಿಗೂ ಹೇಳಲಾರದಂತಹ ಸಂಕಷ್ಟಕ್ಕೆ ಸಿಲುಕಿದ್ದೆ. ಫೈನಾನ್ಸ್ ನ ಈ ಸ್ಥಿತಿ ಹೇಳಿಕೊಂಡಿದ್ದರೆ ಜನ ತಾವು ಹಾಕಿರುವ ಷೇರು ಹಣಕ್ಕೆ ತಕ್ಷಣವೇ ನನ್ನನ್ನು ಪೀಡಿಸುತ್ತಿದ್ದರು. ಪಾರ್ಟ್ನರ್ ಗಳ ಈ ಅವ್ಯೆವಹಾರಕ್ಕೆ ಕಡಿವಾಣ ಹಾಕಿ. ಜನರ ಷೇರು ಹಣವನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತಹ ಒಂದು ದೊಡ್ಡ ಜವಬ್ದಾರಿ ನನ್ನ ಮೇಲಿತ್ತು. ಆದರೆ ಇದು ಕಷ್ಟದ ಕೆಲಸವಾಗಿತ್ತು. ಸಾರ್ವಜನಿಕರಿಂದ ಪಡೆದ ಷೇರು ಹಣ ಸಾರ್ವಜನಿಕರಿಗೆ ಸಾಲವಾಗಿ ನೀಡಲಾಗಿತ್ತು. ಫೈನಾನ್ಸ್ ನಲ್ಲಿ ಪಾರ್ಟ್ನರ್ ಗಳ ಈ ರೀತಿ ಅವ್ಯವಹಾರ ಯಾರಲ್ಲಿಯೂ ಹೇಳಿಕೊಳ್ಳುವಂತಿರಲಿಲ್ಲ. ನಾನು ಒಂದು ರೀತಿ ಭೇಧಿಸಲಾಗದ ಮೋಸದ ಚಕ್ರವ್ಯೂಹದಲ್ಲಿ ಸಿಲುಕಿದ್ದೆ.. ಒಂದು ಅದನ್ನು ಭೇದಿಸಿ ಹೊರಬರಬೇಕಿತ್ತು... ಇಲ್ಲವೇ ಅದೇ ಮೋಸದ ಚಕ್ರವ್ಯೂಹದಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳಬೇಕಿತ್ತು. ನನಗೆ ಪ್ರಾಣ ಕಳೆದುಕೊಳ್ಳಲು ಮನಸ್ಸಾಗಲಿಲ್ಲ. ಏಕೆಂದರೆ ನಾನು ಓದಿದ ವಿದ್ಯಾಭ್ಯಾಸವೇ ನನ್ನಲ್ಲಿ ಅತಿಯಾದ ಆತ್ಮ ವಿಶ್ವಾಸವನ್ನು ತುಂಬಿತ್ತು. ಗೆಳೆಯರನ್ನು ನಂಬಿದ ತಪ್ಪಿಗೆ ಒಂದೆರಡು ವಾರ ಭದ್ರಾನಾಲೆಯ ಕಟ್ಟೆಯ ಮೇಲೆ ಕುಳಿತು ಒಬ್ಬನೇ ಅತ್ತು ಅತ್ತು ಮನಸನ್ನು ಹಗುರ ಮಾಡಿಕೊಳ್ಳುತ್ತಿದ್ದೆ. ಮನಸು ಸಂಪೂರ್ಣ ಹಗುರವಾದ ಮೇಲೆ ನನ್ನ ಫೈನಾನ್ಸ್ ನಲ್ಲಿ ಸಹಭಾಗಿಯಾದ ಗೆಳೆಯರನ್ನೂ ಯಾವ ಮೀನ ಮೇಷವೂ ಏಣಿಸದೇ ಕಿತ್ತೆಸೆದೆ. ಅಲ್ಲಿಂದ ಮತ್ತೊಂದು ಕಷ್ಟದ ಅಧ್ಯಾಯ ಪ್ರಾರಂಭವಾಯಿತು ಒಬ್ಬನೇ ಇರುವುದರಿಂದ ಹಣದ ಕೊರತೆಯುಂಟಾಯಿತು. ಫೈನಾನ್ಸ್ ಗೆ ಮತ್ತಿಬ್ಬರು ಒಳ್ಳೆಯ ಗೆಳೆಯರನ್ನು ಹಾಕಿಕೊಳ್ಳುವುದು ಅನಿವಾರ್ಯವಾಗಿತ್ತು. ನನ್ನ ಸಂಭಂದಿಕರೇ ಒಂದಿಬ್ಬರು ಸಿಕ್ಕರು. ಫೈನಾನ್ಸ್ ಗೆ ಬಂಡವಾಳವನ್ನೂ ಹಾಕಿದರು. ಅಲ್ಲಿ ಅವರಲ್ಲಿ ಬೇಗನೇ ಹಣ ಮಾಡಬೇಕೆಂಬ ದುರಾಸೆಯೇ ಹೆಚ್ಚಾಗಿತ್ತು. ಅಲ್ಲಿ ಮತ್ತೊಂದು ರೀತಿಯ ಸಮಸ್ಯೆಗೆ ಸಿಲುಕಿದೆ. ನಮ್ಮವರೇ ನನಗೆ ಮುಳ್ಳಾದರು. ಅಲ್ಲಿಯೂ ವ್ಯವಹಾರ ಬೆಳೆಯಲಿಲ್ಲ. ಅವರಿಗೂ ಬಂಡವಾಳ ವಾಪಸ್ ಕೊಟ್ಟೆ. ನಾನು ಫೈನಾನ್ಸ್ ಮುಚ್ಚುವಂತೆಯೂ ಇರಲಿಲ್ಲ ನಡೆಸಲೂ ಸಾಧ್ಯವಿರಲಿಲ್ಲ. ನಾನು ಚಕ್ರವ್ಯೂಹದಲ್ಲಿ ಸಿಲುಕಿದ್ದೆ. ಆ ಚಕ್ರವ್ಯೂಹದಲ್ಲಿ ಸೈನಿಕರ ಬದಲಾಗಿ ಕತ್ತಿ ಹಿಡಿದು ನಿಂತಿರುವ ನನ್ನ ಗ್ರಾಹಕರೇ ಕಾಣುತ್ತಿದ್ದರು.. ಬೇರೆ ದಾರಿನೇ ಇಲ್ಲ ಬೇಧಿಸಿ ಹೊರಬರಬೇಕು...ಈ ವ್ಯೂಹವನ್ನು ಬೇಧಿಸುವ ದಾರಿಯಲ್ಲಿ ಅನೇಕ ಜಗಳಗಳು ನಡೆದವು... ಚಿಕ್ಕ ಬಾಲಕ ಅಭಿಮನ್ಯೂವಿನಂತೆ ಒಬ್ಬನದೇ ಹೋರಾಟ. ಯಾರೂ ಇಲ್ಲ ಶಕ್ತಿ ಇದ್ದಷ್ಟು ಸೆಣಸಿದೆ. ಗೆದ್ದೆ. ಆದರೆ ಶರೀರಕ್ಕಾದ ಗಾಯಕ್ಕಿಂತ ಮಾನಸಿಕ ಆಘಾತ ಅತಿಯಾಗಿತ್ತು. ನಾನು ಈ ಜಾಲಕ್ಕೆ ಸಿಲುಕ್ಕಿದ್ದರಿಂದ ಮನೆಯಲ್ಲಿ ನನ್ನನ್ನು ನೋಡುತ್ತಿದ್ದ ವಿಧಾನವೇ ಬೇರೆ ರೀತಿಯಲ್ಲಿತ್ತು. ನನಗೆ ಬಂದ ಒಂದೆರಡು ಮದುವೆಯ ಸಂಬಂಧಗಳು ಮುರಿದು ಬಿದ್ದವು. ಮತ್ತೆ ಕೆಲವನ್ನು ನಾನೇ ಮುರಿದು ಹಾಕಿದೆ. ನನಗೆ ಮದುವೆಗಿಂತ ಹೆಚ್ಚಾಗಿ ಸುತ್ತಲೂ ನನಗರಿವಿಲ್ಲದಂತೆ ಕಟ್ಟಿಕೊಂಡಿದ್ದ ಮೋಸದ ವ್ಯೂಹದಿಂದ ಹೊರಬರಬೇಕಿತ್ತು. ನಾನು ಯಾರಿಗೂ ನನ್ನ ಮನಃಸ್ಥಿತಿಯನ್ನು ಹೇಳಿಕೊಳ್ಳದೇ ನನಗೆ ಬಂದ ತೊಂದರೆಗಳನ್ನು ನಿವಾರಿಸಿಕೊಳ್ಳುತ್ತಾ ಹೋದೆ. ಹೋರಾಟ ಮಾಡಿ ಗೆದ್ದೆ. ಸಾರ್ವಜನಿಕರ ಷೇರು ಹಣವೆಲ್ಲಾ ಹಿಂದಿರುಗಿಸಿದೆ. ಇನ್ನು ಅಲ್ಪ ಸ್ವಲ್ಪ ಉಳಿದವರು ಗಲಾಟೆ ಮಾಡಿದರು. ಮನೆಯ ಹೊರಗೆ ಬಂದರೆ ಜನಗಳಿಂದ ಜಗಳ. ಮನೆಗೆ ಹೋದರೆ ಒಳಗಿನವರ ಜಗಳ... ನನ್ನ ಮೆದುಳು ತಡೆದುಕೊಳ್ಳಲು ಸಾಧ್ಯವಿಲ್ಲದಂತಹ ನೋವುಗಳು ಸಹಿಸುತ್ತಾ ಬಂದವು. ಇವು ಎಲ್ಲೋ ನನ್ನ ಮೆದುಳಿನ ಸುಪ್ತಾವಸ್ತೆಯಲ್ಲಿ ಸೇರಿಕೊಂಡು ಕನಸಿನ ರೂಪದಲ್ಲಿ ಕಾಡಿದ್ದೂ ಉಂಟು. ಹತ್ತಿರದ ಸಂಬಂಧಿಗಳಿಂದ ಕುಹಕ ಮಾತುಗಳನ್ನು ಕೇಳಿದೆ ಈ ಎಲ್ಲಾ ಆಘಾತಗಳು ಈಗಲೂ ನನ್ನ ಮನಸಿನಲ್ಲಿ ಸುಪ್ತ ಪ್ರಜ್ಞಾವಸ್ತೆಯಲ್ಲಿ ಸೇರಿಕೊಂಡವು. ಈ ತರಹದ ಯಾವುದಾದರೊಂದು ಆಹಿತಕರವಾದ ಘಟನೆಗಳು ಎಲ್ಲರ ಜೀವನದಲ್ಲಿಯೂ ನಡೆದಿರುತ್ತದೆ...
ಜಾಗೃತಾವಸ್ತೆ. ಪ್ರಾಯ್ಡ ಮತ್ತು ಯಂಗ್ ಎಂಬ ಮನೋ ವಿಜ್ಞಾನಿಗಳು ಈ ರೀತಿ ಮನೋರೋಗದಿಂದ ಬಳಲುತ್ತಿದ್ದರ ಮೇಲೆ ವೈಜ್ಞಾನಿಕ ಅಧ್ಯಯನ ನಡೆಸಿದರು. ಅವರು ಕಂಡ ಕನಸುಗಳನ್ನು ಬರೆದುಕೊಂಡರು. ಅನೇಕರಲ್ಲಿ ತಾವು ಬಾಲ್ಯದಲ್ಲಿ ಅನುಭವಿಸಿದ ನೋವಿನ ಘಟನೆಗಳಿಗೂ ತಾವು ಕಂಡ ಕನಸುಗಳಿಗೂ ಸ್ವಾಮ್ಯತೆಯನ್ನು ಗಮನಿಸಿದರು. ಸುಪ್ತಾವಸ್ತೆಯಲ್ಲಿರುವ ದಮನಿತ ಆಕಾಂಕ್ಷೆಗಳು ಈ ರೀತಿ ಕನಸಿನ ರೂಪದಲ್ಲಿ ಮೂಡುತ್ತವೆ. ಈ ದಮನಿತ ಘಟನೆಗಳು ಜಾಗೃತಾವಸ್ತೆಗೆ ಬರುವುದೇ ಇಲ್ಲ. ವಿವೇಚನಾ ಶಕ್ತಿ ತುಂಬಾ ಬಲಶಾಲಿಯಾದಾಗ ಕೆಲವು ದಮನಿತ ಘಟನೆ ಆಕಾಂಕ್ಷೆಗಳು ಕೆಟ್ಟ ಕನಸಿನ ರೂಪದಲ್ಲೋ ಅಥವಾ ದೆವ್ವ ಪ್ರೇತವನ್ನು ಕಂಡಂತಲೋ ಬೆಚ್ಚಿ ಹೆದರುತ್ತೇವೆ....
Friday, 10 June 2016
Suma Vasanth Bantwal- Thatt Anta Heli Episode
ಇದು ಥಟ್ ಅಂತ ಹೇಳಿ ಅನ್ನೋ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ನಾನು ಬರೆದ " ನಮ್ಮ ದಿನಾಚರಣೆಗಳು " ಅನ್ನೋ ಪುಸ್ತಕವನ್ನು ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ನೀಡುತ್ತಿರುವುದು.
Saturday, 4 June 2016
Selfee
ಬೆಳಗ್ಗೆಯಿಂದ ನನ್ನ ಸುಕೋಮಲವಾದ ವದನವನ್ನು ಬಹು ಬಗೆಯಲ್ಲಿ ಸೆರೆಹಿಡಿಯಬೇಕೆಂದು ಮೋಬೈಲನ್ನು ತೆಗೆದುಕೊಂಡು ಎಲ್ಲಾ ಕೋನದಿಂದ ತಿರುಗಿಸಿ ತಿರುಗಿಸಿ ನನ್ನ ನಾ ಸೆರೆ ಹಿಡಿದುಕೊಳ್ಳಲು ನೋಡಿದೆ. ಯಾವ ಯ್ಯಾಂಗಲ್ ನಿಂದಲೂ ನಾನು ಚನ್ನಾಗಿ ಕಾಣಲಿಲ್ಲ. ನಾನು ರಾಜ್ ಕುಮಾರ್ ನಂತೆಯೋ, ದೇವಲೋಕದ ಇಂದ್ರನಂತೆಯೋ ಕಾಣಬೇಕೆಂದು ಹಂಬಲಿಸಿದ್ದು ತಪ್ಪಾಯಿತೋ ಏನೋ.....? ಆದರೂ ನನ್ನ ಪ್ರಯತ್ನ ಬಿಡಲಿಲ್ಲ . ಮುಂದುವರೆಸಿದೆ. ನಾನೇ ಹಲವು ರೀತಿಯಲ್ಲಿ ಭಿನ್ನ ಭಿನ್ನ ಭಂಗಿಯಲ್ಲಿ ಕುಳಿತು ನೋಡಿದೆ. ಹಿಂದೆ, ಮುಂದೆ, ಅಕ್ಕ-ಪಕ್ಕ, ಮೇಲೆ, ಕೆಳಗೆ ಎಲ್ಲಾ ರೀತಿಯಲ್ಲೂ ಕುಳಿತೆ. ಹೀಗೆ ಮಗ್ಗುಲನ್ನು ಬದಲಿಸಿ, ಬದಲಿಸಿ ನೋಡಿದೆ. ಎಷ್ಟೇ ಹೊಸ ಹೊಸ ಭಂಗಿಯಲ್ಲಿ ಪ್ರಯತ್ನಿಸಿ ನೋಡಿದರೂ ಹಳೆಯ ಬ್ಲ್ಯಾಕ್ ಅಂಡ್ ವೈಟ್ ಪಿಕ್ಚರ್ ನ ವಿಲನ್ ನಂತೆಯೇ ಕಾಣುತ್ತಿದ್ದೆ. ನನ್ನ ಈ ಸೆಲ್ಫಿ ತೆಗೆಯುವ ಮಂಗನಾಟವನ್ನು ಯಾರಾದರೂ ನೋಡಿದರೆ ಎಷ್ಟು ನಗುತ್ತಿದ್ದರೋ ಏನೋ..ನಗುವುದು ಹಾಗಿರಲಿ ನನ್ನನ್ನೇ ಹುಚ್ಚನೆಂದು ಅಂದು ಕೊಂಡರೇ..? ಅಂದು ಕೊಂಡರೂ ತಪ್ಪೇನಿಲ್ಲ ಬಿಡಿ ನನ್ನ ಸೆಲ್ಫಿಯ ಗೀಳು ಹೆಚ್ಚು ಕಡಿಮೆ ಹಾಗೇ ಇತ್ತು. ನಾನು ಎಲ್ಲಾ ರೀತಿಯ ಹಾವ ಭಾವವನ್ನು ನನ್ನ ಮೊಬೈಲ್ ಕ್ಯಾಮರಾದ ಮುಂದೆ ಪ್ರದರ್ಶಿಸುತ್ತಿದ್ದೆ. ಅಂದರೆ ವಕ್ರ ವಕ್ರವಾಗಿಯೂ ಅಂಕುಡೊಂಕಾಗಿಯೂ... ಮುಖದಲ್ಲಿ ನವರಸಗಳೆಲ್ಲವನ್ನು ಕಿತ್ತು ಬರುವ ಹಾಗೆ ತೋರಿಸಿಕೊಂಡೆ. ಯಾವ ರಸವೂ ನನ್ನ ಮುಖಕ್ಕೆ ಚಂದವಾಗಿ ಕಾಣಿಸಲೇ ಇಲ್ಲ. ಒಂದೊಂದು ಮುಖದ ರಸಭಾವಗಳೂ ಸಹ ಒಬ್ಬೊಬ್ಬ ವಿಲನ್ ಗಿಂತಲೂ ಕಡಿಮೆಯೇನೂ ಇರಲಿಲ್ಲ. ಹೀಗೆ ಕಾಣುತ್ತಿದ್ದ ವಿಲನ್ ಗಳಿಗೆ ಇನ್ನಷ್ಟು ವಕ್ರತನ, ಕುರೂಪವನ್ನು ಮಿಕ್ಸ್ ಮಾಡಿ ನೋಡಿದರೆ ಹೇಗಿರುತ್ತಿದ್ದರೋ ಅದಕ್ಕಿಂತ ಕೆಟ್ಟದಾಗಿಯೇ ನನ್ನ ಮುಖ ಕಾಣುತ್ತಿತ್ತು. ಕೊನೆಗೆ ಮೊಬೈಲ್ ಸರಿಯಿಲ್ಲವೇನೋ ಎಂದು ಅನುಮಾನಿಸಿದೆ. ಎಕ್ಟ್ರ ಫೋಟೋ ಎಡಿಟರ್ ಅಪ್ಲಿಕೇಷನ್ ನಲ್ಲಿ ನಾನು ತೆಗೆದ ಪೋಟೋವನ್ನು ಮಿಕ್ಸಿಂಗ್ ಮಾಡಿ, ಸ್ವಲ್ಪ ಆಧುನಿಕತೆಯ ಟಚ್ ಕೊಟ್ಟು ನೋಡಿದೆ. ಆದರೆ ಅದರಲ್ಲಿ ಅತಿಯಾದ ಮೇಕಪ್ ನಿಂದಾಗಿ ಯಕ್ಷಗಾನ ಕಲಾವಿದನಂತೆಯೂ. ಬೂದಿ ಬಳಿದುಕೊಂಡ ಅಘೋರಿಯಂತೆ ಕಂಡೆನೇ ಹೊರತು ನಾನಂದು ಕೊಂಡಂತೆ ರಾಜಕುಮಾರನ ರೂಪ ನನ್ನಲ್ಲಿ ಬರಲೇ ಇಲ್ಲ.ನಾನು ನನ್ನ ಪೋಟೋ ಶೂಟ್ ಮಾಡಿಕೊಂಡ ಸ್ಥಳಗಳನ್ನು ಹೇಳಿಕೊಂಡರೆ ನಕ್ಕು ಬಿಡುತ್ತೀರಿ. ಬೆಡ್ ರೂಮಲ್ಲಿ ಮಂಚದ ಮೇಲೆ... ಮನೆಯ ಮುಂಬಾಗ ಯಾರೋ ನಿಲ್ಲಿಸಿದ ಕಾರಿನ ಮುಂದೆ ನಿಂತು... ಅಡುಗೆ ಮನೆಯಲ್ಲಿ ಸೌಡನ್ನು ಹಿಡಿದು... ಅಡುಗೆಯವನ ರೂಪದಲ್ಲಾದರೂ ಚನ್ನಾಗಿ ಕಾಣುವೆನೇನೋ ಎಂಬ ಪ್ರಯತ್ನವೂ ಸಹ ನಡೆದು ಹೋಯಿತು... ಹಾಲ್ ನಲ್ಲಿ ತಲೆಗೆ ಟವಲ್ ಸುತ್ತಿಕೊಂಡು ನೋಡಿದೆ... ಇವೆಲ್ಲಾ ಪ್ರಯತ್ನದ ನಂತರ ಬಾತ್ ರೂಮ್ ನಲ್ಲಿ ಸೇವಿಂಗ್ ಮಾಡುವಾಗಲೂ ಒಂದೆರೆಡು ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡೆ.. ಯಾರಾದರೂ ಇಂತಹ ಫೋಟೋಗಳನ್ನು ನೋಡಿದರೆ ನಗದೇ ಇರುತ್ತಾರೆಯೇ...? ಖಂಡಿತ ನೋಡಿ ನಗುವರು ಎಂದು ಅನುಮಾನಿಸಿ ಆ ಪೋಟೋಗಳನ್ನು ಅಲ್ಲೇ ಡಿಲೀಟ್ ಮಾಡಿಬಿಟ್ಟೆ. ಸ್ಥಳ ಯಾವುದಾದರೇನು.. ರೂಪ ಅದೆಯಲ್ಲವೇ..? ಆದರೂ ಸಹ ಚನ್ನಾಗಿ ಕಾಣಲೇ ಬೇಕು ಎನ್ನುವ ಛಲ ಇದೆಯಲ್ಲ ಅದು ನನ್ನಲ್ಲಿ ಶತಾಯು ಗತಾಯುವಾಗಿ ನಡೆಯುತ್ತಲೇ ಇತ್ತು...
"ನೀವು ಅಪ್ಸರೆಯಂತೆ ಸುಂದರವಾಗಿದ್ದೀರಿ"
ಎನ್ನುತ್ತಾ ಅವಳ ಕೆನ್ನೆಯನ್ನು ಹಿಂಡಿದೆ. ಅವಳು ನಾಚಿ ಇನ್ನೊಂದು ಕೆನ್ನೆ ಕೆಂಪಾಗಿಸಿಕೊಂಡಳು...
" ನಿಮ್ಮಷ್ಟು ಸುಂದರವಿಲ್ಲ ಬಿಡಿ.."
ಎಂದು ಹೇಳುತ್ತಾ ಅವಳು ಇನ್ನೇನು ನನ್ನ ಎದೆಯ ಗೂಡಿನಲ್ಲಿ ಗುಬ್ಬಚ್ಚಿಯಂತೆ ಅವಿತುಕೊಳ್ಳಲು ಮುಂದಾದಳು. ಕೂಡಲೇ ಅವಳ ತಂಗಿ ನಮ್ಮ ಮೊದಲ ಪ್ರೇಮ ಸ್ಪರ್ಶಕ್ಕೆ ಅಡ್ಡಲಾಗಿ ಬಂದಳು...
"ಏನ್ ಭಾವ... ನಿಮ್ ಫೋಟೋ ಅಕ್ಕನಿಗೆ ಎಷ್ಟು ಮೋಡಿ ಮಾಡಿದೆ ಗೊತ್ತಾ... ನಿಮ್ ಫೋಟೋ ನನ್ಹತ್ರ ಇಟ್ಕೊಂಡು ಅಕ್ಕನಿಗೆ ಎಷ್ಟು ಆಟ ಆಡಿಸಿದ್ದೀನಿ ಗೊತ್ತಾ.?
ಎನ್ನುತ್ತಾ ನನ್ನ ಫೋಟೋ ಕೈಯಲ್ಲಿ ಹಿಡಿದು ಮತ್ತೆ ತನ್ನಕ್ಕನಿಗೆ ಸತಾಯಿಸಲು ಮುಂದಾದಳು.
ಮಾನಸ ಮಾತ್ರ ತಂಗಿಯ ಮಾತಿಗೆ ಉತ್ತರಿಸದೇ ನಾಚಿಕೆಯಿಂದ ಮೌನವಾಗಿ ಕುಳಿತ್ತಿದ್ದಳು. ನಾನು ಅಂದುಕೊಂಡಿದ್ದ ಆ ಕೆಟ್ಟ ಫೋಟೋ ಈ ತರಹದ ಮೋಡಿ ಮಾಡಿದ್ದು ನೋಡಿ ನಾನು ತುಟಿಯಂಚಿನಲ್ಲೇ ನಕ್ಕು ಸುಮ್ಮನಾದೆ. ಅವತ್ತೇ ನನಗೂ ಗೊತ್ತಾಗಿದ್ದು. ನಾವು ಸಹ ರೂಪ ಲಾವಣ್ಯದಲ್ಲಿ ಒಂದು ಕೈ ಮೇಲೆನೇ ಇದ್ದೕವಿ ಅಂತ. ನನಗೆ ಮಾತ್ರ ನನಗಿಂತ ಸುಂದರ ಹುಡುಗಿ ಸಿಕ್ಕಳೆಂಬ ಸಂತಸ ಇತ್ತು. ಅವಳು ನನ್ನ ಕಡೆ ನೋಡುತ್ತಿದ್ದ ಆ ಕಳ್ಳ ನೋಟ ಎದೆಯೊಳಗೆ ಇನ್ನಷ್ಟು ಕಚಗುಳಿಯನ್ನು ಇಟ್ಟಿತ್ತು.....
