Wednesday, 25 October 2017

ಬಟ್ಟೆ

ಬಟ್ಟೆ

ಎಲೆಯಂ ಸುತ್ತಿ, ವಸ್ತ್ರವಂ ಹಾಕಿ
ಆದಿವಾಸಿ ಹಂತವಂ ದಾಂಟಿ
ಪುನಃ ಶಿಲಾಯುಗದಲಿ ನೆಲೆ ನಿಂತು
ಮಾನವ ವ್ಯವಸ್ಥೆಗೆ ಬುನಾದಿ ಹಾಕಿದನಯ್ಯ..

ಆಧುನಿಕ ಪರಧಿಯಲಿ
ವೈಭೋಗದ ವಸ್ತ್ರಗಳು ರಮಣಿಸಿ
ಅತ್ಯಲ್ಪ ತುಂಡು ಬಟ್ಟೆಯಂ ಧರಿಸಿ
ಮತ್ತೆ ಆದಿವಾಸಿಯತ್ತ ಸಾಗಿದನಯ್ಯ...

ಆದಿವಾಸಿಯಿಂದ ನಾಗರಿಕತೆಂಗೆ ಸಾಗಿ
ನಾಗರೀಕತೆಯಿಂದ ಆದಿವಾಸಿಯತ್ತಂ
ಪಯಣಂ ಬೆಳೆಸಿದುದು ತೊಟ್ಟ ವಸ್ತ್ರಂ
ಸಾಕ್ಷಿಯಾಗಿ ನಿಂತಿರುವುದಯ್ಯ..

ಆದಿವಾಸಿಂಗೆ ತುಂಡು ವಸ್ತ್ರವ ನೀಡಿದೆ
ಆದುನಿಕ ವಾಸಿಂಗೂ ತುಂಡು ವಸ್ತ್ರವ ನೀಡಿದೆ
ಎತ್ತಲಿದೆಂತ್ತ ಕೊಂಡೊಯ್ಯುವೆ ಅಯ್ಯಾ
ಪರ ಪರ ಶ್ರೀ ಪಾಶ್ಚ್ಯಾತ್ತೇಶ್ವರಾ...!!!

ಪ್ರಕಾಶ್ ಎನ್ ಜಿಂಗಾಡೆ

No comments:

Post a Comment