ಎಂದೋ ಮನದಲಿ ಹುಟ್ಟಿದ ಪ್ರೀತಿ
ಇಂದಿಗೂ ನವನವೀನವಾಗಿ ಕಾಡುತಿಹುದು...
ರಂಗು ರಂಗಿನ ಚಿತ್ತಾರವ ಬಿಂಬಿಸಿ
ಯೌವ್ವನದ ಕನಸು ಹಿತವಾಗಿಹುದು...
ಪ್ರೀತಿಯೆಂಬ ಶರಧಿಯ ಮೇಲೆ
ಬಾಳ ನೌಕೆ ಮುಂದೆ ಸಾಗಿಹುದು..
ಇಳಿ ವಯಸಲೂ ಅದೇ ನೆನಪುಗಳು
ದುಗುಡದಲೂ ತಿಳಿ ಹಿತವ ತರುತಿಹುದು..
ಅದಕೆಯೇ ಅಜ್ಜ ನಾಚುತಿಹನು
ಯೌವ್ವನದ ಕನಸ ನೆನೆ ನೆನೆದು...
ಅಜ್ಜಿಗೆ ಮತ್ತೆ ಯೌವ್ವನ ಮುತ್ತುವುದು
ಮೊದಲ ಸ್ಪರ್ಶದ ಆ ಪ್ರೀತಿಯ ನೆನೆದು...
ಸಾವು ಸಹ ಸುಖವೆನಿಸುವುದು
ಜೊತೆಯಿರಲು ಪ್ರೀತಿ ಅನುದಿನವೂ...
-ಪ್ರಕಾಶ್ ಎನ್ ಜಿಂಗಾಡೆ
No comments:
Post a Comment