Wednesday, 20 September 2017

ಮಗಳು (ಕವನ)

ಮಗಳು

ತೊದಲು ನಾಲಿಗೆಯ ನುಡಿ
ಮುದ್ದಾದ ಮುಖ
ತುಟಿಯಂಚಿನ ತುಂಟತನ
ಕಣ್ಣಲ್ಲಿಯ ಪ್ರೀತಿ ನೋಡಿ
ದಣಿದು ಬಂದ ಅಪ್ಪ
ಎಲ್ಲೋ ಕಳೆದು ಹೋಗುವನು.....

ಸತ್ತಾಗ ಕಂಬನಿಗೆರೆವರು
ಯಾರೆಂದು ತಿಳಿಯದ 
ಮೂರ್ಖರು
ಕುಡಿಯಲ್ಲೇ ಚಿವುಟುವರು
ಅಜ್ಞಾನವ ಮೆರೆವರು
ಹೆಣ್ಣ ಪ್ರೀತಿ ಕಾಣದ ಗಾವಿಲರು....

                -ಪ್ರಕಾಶ್ ಎನ್ ಜಿಂಗಾಡೆ

No comments:

Post a Comment