Monday 20 July 2020

ವೈಯುಕ್ತಿಕ ಪತ್ರ

                                                       ಮಾದರಿ ಪತ್ರಗಳು.

      ನಿಮ್ಮನ್ನು ಮನೋಜ್ 10ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ದಾವಣಗೆರೆ ಎಂದು ತಿಳಿದು ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿರುವ ನಿಮ್ಮ ತಂದೆಗೆ ವಿದ್ಯಾಭ್ಯಾಸದ ಕುರಿತು ಒಂದು ಪತ್ರ ಬರೆಯಿರಿ.
                                                                                  
ಇವರಿಂದ
ಮನೋಜ್                                                 
10ನೇ ತರಗತಿ                                   
ಸರ್ಕಾರಿ ಪ್ರೌಢಶಾಲೆ, ಮೈಸೂರು 

ದಿನಾಂಕ : 07.07.2019

         ತೀರ್ಥರೂಪರಿಗೆ ನಿಮ್ಮ ಮಗನಾದ ಮನೋಜನು ಮಾಡುವ ಸಾಷ್ಟಾಂಗ ನಮಸ್ಕಾರಗಳು. ಇಲ್ಲಿ ನಾನು ಕ್ಷೇಮ, ನಿಮ್ಮ ಕ್ಷೇಮ ಸಮಾಚಾರಕ್ಕೆ ಪತ್ರ ಬರೆಯಿರಿ.
        ಈ ಪತ್ರ ಬರೆಯಲು ಕಾರಣವೇನೆಂದರೆ ನಮ್ಮ ಶಾಲೆಯಲ್ಲಿ ಈಗ ರೂಪಣಾತ್ಮಕ ಪರೀಕ್ಷೆಗಳು ಪ್ರಾರಂಭವಾಗಲಿದೆ. ಈ ಬಾರಿ ನಾನು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆಯಬೇಕೆಂದುಕೊಂಡಿರುವುದರಿಂದ ಉತ್ತಮವಾಗಿ ಅಭ್ಯಾಸವನ್ನು ಮಾಡುತ್ತಿದ್ದೇನೆ. ನನ್ನ ಸ್ನೇಹಿತರು ಸಹ ನನಗೆ ಸಹಕಾರ ನೀಡುತ್ತಿದ್ದಾರೆ. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದೇನೆ.  ನನಗೆ ಗೊತ್ತಾಗದ ವಿಷಯಗಳನ್ನು ಕೇಳಿ ತಿಳಿಯುತ್ತಿದ್ದೇನೆ.  ನನಗೆ ನಿಮ್ಮ ಆಶೀರ್ವಾದವು ಇರಲಿ.
      ಇನ್ನೇನು ವಿಷಯವಿಲ್ಲ. ನನ್ನ ತಾಯಿಗೆ ಹಾಗೂ ಅಣ್ಣನಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ. ನಿಮ್ಮ ಪತ್ರಕ್ಕಾಗಿ ಕಾದಿರುವೆ.

ಇಂತಿ ನಮಸ್ಕಾರಗಳು
                                                                                                              ಇತಿ ತಮ್ಮ ಪ್ರೀತಿಯ ಮಗ,
                                                                                                                            ಮನೋಜ್
ಹೊರ ವಿಳಾಸ
ಗೆ,
ನಾರಾಯಣ ರಾವ್
ಮನೆ ನಂ. 12/21, 4ನೇ ಅಡ್ಡರಸ್ತೆ,
ಕುವೆಂಪು ನಗರ, ಮೈಸೂರು