Tuesday 8 August 2017

ಪರಿಚಯ

ಹೆಸರು :-   ಪ್ರಕಾಶ್ ಎನ್ ಜಿಂಗಾಡೆ 

ಹುಟ್ಟಿದ ಸ್ಥಳ :- ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ, ಬಸವಾಪಟ್ಟಣ 

ನೆಲೆ:- ಬೆಂಗಳೂರು

ವಿದ್ಯಭ್ಯಾಸ :-  ಎಂ. ಎ ,  ಬಿ.ಇಡಿ.

ವೃತ್ತಿ :-  ಪ್ರಸ್ತುತ ರಾಯನ್ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜ್ಹಕ, ಬೆಂಗಳೂರಿನಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದೆನೆ.

ಹವ್ಯಾಸ :- ಕನ್ನಡದಲ್ಲಿ ಕತೆ, ಕವನ, ಕಾದಂಬರಿ, ಲಲಿತ ಪ್ರಭಂದ, ಇತ್ಯಾದಿ ಪ್ರಕಾರಗಳಲ್ಲಿ ಬರವಣಿಗೆ, ಪುಸ್ತಕ ಓದು, ಹಾಡು ಸಂಗೀತಗಳನ್ನು ಕೇಳುವುದು, ಉಪನ್ಯಾಸ...ಇತ್ಯಾದಿ.

ಕೃತಿಗಳು:-

1). ಶಿಕ್ಷಕರ ಜೊತೆಗೆ (2008- ವಿಕ್ರಮ್ ಪ್ರಕಾಶನ)
ಈ ಪುಸ್ತಕ 2008 ರಲ್ಲಿ ಪ್ರಕಟವಾಗಿದ್ದು, ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯು ಈ ಪುಸ್ತಕವನ್ನು ಕರ್ನಾಟಕದಲ್ಲಿರುವ ಎಲ್ಲಾ ಶಾಲೆಗಳ ಗ್ರಂಥಾಲಯಕ್ಕೆ ಖರೀಧಿಸಿದ್ದು ಈ ಪುಸ್ತಕದ ಮತ್ತೊಂದು ಹೆಗ್ಗಳಿಕೆಯಾಗಿದೆ.

  2). ನಮ್ಮ ದಿನಾಚರಣೆಗಳು (2014- ಪ್ರತಿಭಾ ಪ್ರಕಾಶನ) ಈ ಪುಸ್ತಕವು ಕನ್ನಡದ ಚಂದನ ಟಿ.ವಿ. ವಾಹಿನಿಯ "ಥಟ್ ಅಂತ ಹೇಳಿ" ಕಾರ್ಯಕ್ರಮದಲ್ಲಿ ಹಲವು ತಿಂಗಳವರೆಗೆ ವಿಜೇತರಿಗೆ ಬಹುಮಾನವಾಗಿ ನೀಡಲಾಗುತ್ತಿದ್ದು ಇದು ಪುಸ್ತಕದ ಜನಪ್ರಿಯತೆಗೆ ಸಾಕ್ಷಿಯಾಗಿದೆ.

3) ಕನ್ನಡ ಕಸ್ತೂರಿ 10 ಮಾರ್ಗದರ್ಶಿ (ಸುಭಾಷ್ ಪಬ್ಲಿಕೇಶನ್)ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

4) ಇಬ್ಬನಿಯಲಿ ಅವಳ ಕಂಡಾಗ - ಕಥಾಸಂಕಲನ  (ಹೆಚ್,ಎಸ್,ಆರ್,ಎ, ಪ್ರಕಾಶನ- 2018)

5)  ಪ್ರೇತಾತ್ಮದ ಮನೆಯಲ್ಲಿ - ಕಾದಂಬರಿ.
ಕಾವ್ಯ ಮಿತ್ರ ಪ್ರಕಾಶನದಿಂದ ನವಂಬರ್ 04-2018 ರಲ್ಲಿ ಲೋಕಾರ್ಪಣೆ.

6) ಮನದಾಸೆ ಹಕ್ಕಿಯಾಗಿ - ಕಥಾ ಸಂಕಲನವು ಹೆಚ್.ಎಸ್.ಆರ್.ಎ ಪ್ರಕಾಶನದಿಂದ 2019 ಜನವರಿ  06 ರಲ್ಲಿ ಲೋಕಾರ್ಪಣೆ

7) ಮೃತ್ಯು ದಂಡಂ - ಕಾದಂಬರಿಯು ದಿನಾಂಕ 21-07-2019 ರಲ್ಲಿ ಗುಂಡ್ಲು ಪೇಟೆಯಲ್ಲಿ ನಡೆದ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ಐದನೇ ಕಾರ್ಯಕಾರಿಣಿ ಸಭೆಯಲ್ಲಿ ಲೋಕಾರ್ಪಣೆ

8) ಬಿಡಿಯಾಗಿ ಬಿದ್ದ ಭಾವಗಳು - ಪ್ರಬಂಧ ಸಂಕಲನವು ಜೂನ್ 2022 ರಂದು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ಲೋಕಾರ್ಪಣೆ 

9) ಸುಭಾಷ್ ಮಾರ್ಗದರ್ಶಿ  I PU study book (2013- ಸುಭಾಷ್ ಪಬ್ಲಿಕೇಶನ್) ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

10) ಸುಭಾಷ್ ಮಾರ್ಗದರ್ಶಿ  II PU study book (2013- ಸುಭಾಷ್ ಪಬ್ಲಿಕೇಶನ್) ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

11) ಸಾಹಿತ್ಯ ಸಂಚಲನ ಐ,ಸಿ,ಎಸ್,ಇ ಮಾರ್ಗದರ್ಶಿ (2014) ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

12) ಸುಭಾಶ್ ಗೈಡ್ II B. Com Bangalore university Guide ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

13) ಸುಭಾಶ್ ಗೈಡ್ III B. Com Bangalore university Guide ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

14) ಸುಭಾಶ್ ಗೈಡ್ I B.A Bangalore university Guide ವಿದ್ಯಾರ್ಥಿಗಳಿಗಾಗಿ ರಚಿಸಿದ ಕೈಪಿಡಿ

ಪ್ರಶಸ್ತಿಗಳು

1) ಕನ್ನಡ ಸಂಘಟನಾ ಶಿಕ್ಷಕ ಪ್ರಶಸ್ತಿ (ಸಿರಿಗನ್ನಡ ಪ್ರಕಾಶನ ಚಿತ್ರದುರ್ಗ)

2) ಕನ್ನಡ ರತ್ನ ಪ್ರಶಸ್ತಿ ( ಸಿರಿಗನ್ನಡ ಪ್ರಕಾಶನ)

3) ಉತ್ತಮ ಶಿಕ್ಷಕ (ರಾಯನ್ ಸಂಸ್ಥೆ 2011- ಶಿಕ್ಷಕ ದಿನಾಚರಣೆಯಲ್ಲಿ)

4) "ವಿಶ್ವಮಾನ್ಯ ಕನ್ನಡಿಗ" ದಿನಾಂಕ 11-03-2018 ರಲ್ಲಿ ಬಿಜಾಪುರ ಜಿಲ್ಲೆ ಇಂಡಿಯಲ್ಲಿ ನಡೆದ ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ  ಪ್ರಶಸ್ತಿ

5) "ನೇಷನ್ ಬ್ಯುಲ್ಡರ್" ಅಖಿಲ ಭಾರತ ಭಾವಸಾರ ಮಹಾಸಭಾ ರವರಿಂದ  ಪ್ರಶಸ್ತಿ 02-09-2017 ರಲ್ಲಿ

6) ಕನ್ನಡ ಸಾಹಿತ್ಯ ರತ್ನ - ಹೆಚ್ ಎಸ್ ಆರ್ ಎ,  ಪ್ರಕಾಶನ ಇವರಿಂದ ಕವಿವೃಕ್ಷ ಬಳಗದಿಂದ ಕಾರ್ಯಕ್ರಮ ಸಂಘಟನೆ. ಪ್ರತಿಭಾವಂತರ ಶೋದ ಮತ್ತು ಹದಿನೈದು ಕೃತಿಗಳ ಲೋಕಾರ್ಪಣೆ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ, 2018 ಜಲೈಯ ಒಂದರಂದು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ.

7. ಕರುನಾಡ ಚೇತನ ಸಾಹಿತ್ಯ ಸನ್ಮಾನ - 25-12-2018 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಮಾರಂಭದಲ್ಲಿ ಧಾರವಾಡದ ಚೇತನಾ ಪ್ರಕಾಶನವು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ .

8. ಕನ್ನಡ ಸೇವಾರತ್ನ ಪ್ರಶಸ್ತಿ - ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತುವತಿಯಿಂದ ದಿನಾಂಕ ಮೇ 12, 2019

7) 3 K (ಕನ್ನಡ ಕಥನ ಕವನ) ಸಂಘಟನೆಯಿಂದ ಉತ್ತಮ ಕವನ ವಾಚನಕ್ಕಾಗಿ ಪ್ರಶಸ್ತಿ 2016

8) ಕ್ರಾಂತಿ ಪ್ರಕಾಶನ ರವರು ಧಾರಾವಾಡದಲ್ಲಿ ದಿಂನಾಂಕ 01-10-2017 ರಂದು ಆಯೋಜಿಸಿದ ರಾಜ್ಯ ಮಟ್ಟದ ಕವನ ವಾಚನ ಸ್ಪರ್ಧೆಗೆ ಆಯ್ಕೆ. ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯ ಗೌರವ.

9) ಕಣ್ಣಿನ ಮಾತುಗಳು - ಎಂಬ ನನ್ನ ಕತೆಯು 2017 ಸೆಪ್ಟೆಂಬರ್ 2 ರಂದು ಉತ್ತರ ಅಮೇರಿಕಾ ಟೆಕ್ಸಸ್ ರಾಜ್ಯದ ಡ್ಯಾಲಸ್ ನಗರನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಕಥಾ ಸ್ಪರ್ಧೆಯಲ್ಲಿ ಬಹುಮಾನಿತ ಕಥೆ ಮತ್ತು ವಿಶ್ವ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಪ್ರಕಟಣೆಯ ಗೌರವ.

10) 2017 ನವಂಬರ್ 26 ರಂದು ನಡೆದ "ಕನ್ನಡ ಕಥನ ಕವನ (3ಕೆ)" ರಾಜ್ಯೋತ್ಸವ ಸಮಾರಂಭದಲ್ಲಿ ನನ್ನ ಪ್ರಬಂಧ ಲೇಖನಕ್ಕೆ ಪ್ರಥಮ ಬಹುಮಾನದ ಗೌರವ 

11) ಸರಜೂ ಕಾಟ್ಕರ್ ಸಾಹಿತ್ಯ ಪುರಸ್ಕಾರ :- ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಬೆಳಗಾವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ದಿನಾಂಕ 20-03-2022 ರಂದು ಗೌರವಿಸಲಾಯಿತು.

12. ಎಂ ಡಿ ಗೋಗೇರಿ ಸಾಹಿತ್ಯ ಸದ್ಭಾವನ ಪ್ರಶಸ್ತಿ : ಚೇತನಾ ಫೌಂಡೇಶನ್ನಿನ ನಾಲ್ಕನೇ ಸಾಹಿತ್ಯ ಸಮ್ಮೇಳನ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 24-04-2022 ರಂದು ಗೌರವ ಸನ್ಮಾನ 

ಸಂಪಾದನಾ ಕೃತಿಗಳು

1. ಕವಿ ಮನದ ಕುಸುಮಗಳು (ಕವನ ಸಂಕಲನ) 2018 ಹೆಚ್,ಎಸ್,ಆರ್,ಎ ಪ್ರಕಾಶನ

2. ಕಥಾವೃಕ್ಷ (ಕಥಾ ಸಂಕಲನ)
2018 ಹೆಚ್,ಎಸ್,ಆರ್,ಎ ಪ್ರಕಾಶನ

3. ನವಿಲುಗರಿಯ ಬಣ್ಣಗಳು (ಕವನ ಸಂಕಲನ)
2018 ಹೆಚ್,ಎಸ್,ಆರ್,ಎ ಪ್ರಕಾಶನ

ನನ್ನ ಲೇಖನಗಳಿರುವ ಇತರ ಪುಸ್ತಕಗಳೆಂದರೆ

1. "ಶಿಕ್ಷಕ ವೃತ್ತಿಯ ಪಾವಿತ್ರ್ಯತೆ"
2. "ಕನಸಿನ ಕರ್ನಾಟಕ"
ಮತ್ತು
3. "ಕಾವ್ಯ ರಶ್ಮಿ" ಪುಸ್ತಕ ಬಿಡುಗಡೆ.

ಸಾಹಿತ್ಯ ಸೇವೆಗಳು

ಮೇ 20 , 2018 ರಂದು ಬೆಂಗಳೂರು ಕವಿವೃಕ್ಷ ಬಳಗದ ಅಧ್ಯಕ್ಷನಾಗಿ ಆಯ್ಕೆ.

1. ಜುಲೈ 01-2018 ರಂದು ಸಾಹಿತ್ಯ ಸಂಘಟನೆಯಲ್ಲಿ ತೋಡಗಿಕೊಂಡು ರಾಜ್ಯ ಮಟ್ಟದ ಕವಿಗೋಷ್ಟಿ ಮತ್ತು ಪುಸ್ತಕ ಬಿಡುಗಡೆ ಸಮಾರಂಭದ ಆಯೋಜನೆ, ಕನ್ನಡ ಸಾಹಿತ್ಯ ಪರಿಷತ್ತು ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಈ ಸಮಾರಂಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಭಾಗವಹಿಸಿದ್ದು, ಹನ್ನೊಂದು ಕವಿಗಳ ಹದಿನೈದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಈ ಮಹತ್ಕಾರ್ಯಕ್ಕೆ ಮತ್ತು ನನ್ನ ಇಬ್ಬನಿಯಲಿ ಅವಳ ಕಂಡಾಗ ಕಥಾಸಂಕಲನಕ್ಕೆ ಹೆಚ್,ಎಸ್,ಆರ್,ಎ, ಪ್ರಕಾಶನವು "ಕನ್ನಡ ಸಾಹಿತ್ಯ ರತ್ನ" ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಿತು.

ಇತರ ಸೇವೆಗಳು

1) 2012 ರಲ್ಲಿ ಮುಂಬೈ ಮತ್ತು ಔರಂಗಾಬಾದ್ (ಮಹಾರಾಷ್ಟ್ರ) ಸೋಶಿಯಲ್ ಸರ್ವೀಸ್ ಕ್ಯಾಂಪ್ ನಲ್ಲಿ ಭಾಗವಹಿಸುವಿಕೆ)

2) 2014 ರಲ್ಲಿ ಮತ್ತೆ ಮುಂಬೈ, ಔರಂಗಾಬಾದ್ ನಲ್ಲಿ ನಡೆದ ಸೋಶಿಯಲ್ ಸರ್ವಿಸ್ ಕ್ಯಾಂಪ್ ನಲ್ಲಿ ಭಾಗವಹಿಸುವಿಕೆ

3) 2016 ರಲ್ಲಿ  ದಮನ್ (ಕೇಂದ್ರಾಡಳಿತ ಪ್ರದೇಶ... ಸೌತ್ ಗುಜರಾತ್) ನಲ್ಲಿ ನಡೆದ ಸೋಶಿಯಲ್ ಸರ್ವೀಸ್ ಕ್ಯಾಂಪ್ ನಲ್ಲಿ ಭಾಗವಹಿಸುವಿಕೆ

ಸಂಘಟನಾ ಸೇವೆ

ಮೇ 21- 2018 ರಲ್ಲಿ, ಬೆಂಗಳೂರು ಕವಿವೃಕ್ಷ ಬಳಗದ ಅಧ್ಯಕ್ಷನಾಗಿ ಆಯ್ಕೆ

1. ಜುಲೈ -30- 2018 ರಲ್ಲಿ ಬೆಂಗಳೂರು ಕವಿ ವೃಕ್ಷ ಬಳಗದಿಂದ , ರಾಜ್ಯ ಮಟ್ಟದ ಕವಿಗೋಷ್ಠಿ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ. ರಾಜ್ಯದಾದ್ಯಂತ ಹದಿನೈದು ಉದಯೋನ್ಮುಖ ಕವಿಗಳನ್ನು ಗುರುತಿಸಿ, ಅವರ ಪುಸ್ತಕ ಪ್ರಕಟಣೆಗೆ ಸಹಾಯ ಮತ್ತು ಲೋಕರ್ಪಣೆಯ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.

2. ನವಂಬರ್ 04. 2018 ರಲ್ಲಿ ಬೆಂಗಳೂರು ಕವಿ ವೃಕ್ಷ ಬಳಗದಿಂದ , ಸಾಹಿತ್ಯ ಸಂಭ್ರಮ, ಕವಿಗೋಷ್ಠಿ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಯಿತು. ರಾಜ್ಯದಾದ್ಯಂತ ಹನ್ನೆರಡು  ಉದಯೋನ್ಮುಖ ಕವಿಗಳನ್ನು ಗುರುತಿಸಿ, ಅವರ ಪುಸ್ತಕ ಪ್ರಕಟಣೆಗೆ ಸಹಾಯ ಮತ್ತು ಲೋಕರ್ಪಣೆಯ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು

3. ಜನವರಿ 6- 2019 ರಲ್ಲಿ ಬೆಂಗಳೂರು ಕವಿ ವೃಕ್ಷ ಬಳಗದಿಂದ , ಸಂಕ್ರಾಂತಿ ಸಾಹಿತ್ಯ ಸುಗ್ಗಿ ರಾಜ್ಯ ಮಟ್ಟದ ಕವಿಗೋಷ್ಠಿ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಆಯೋಜನೆ. ರಾಜ್ಯದಾದ್ಯಂತ ಹನ್ನೆರಡು ಉದಯೋನ್ಮುಖ ಕವಿಗಳನ್ನು ಗುರುತಿಸಿ, ಅವರ ಪುಸ್ತಕ ಪ್ರಕಟಣೆಗೆ ಸಹಾಯ ಮತ್ತು ಲೋಕರ್ಪಣೆಯ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.

ಉಪನ್ಯಾಸ 

1. ರವಿಕಿರಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಮತ್ತು ಕನ್ನಡ ಸಾಹಿತ್ಯದಲ್ಲಿ ಹನಿಗವನಗಳ ಪಾತ್ರದ ಕುರಿತು ಉಪನ್ಯಾಸ

2. ಸಿರಿಗನ್ನಡ ಬಳಗದ ಸಾಹಿತ್ಯ ಗೋಷ್ಠಿಯಲ್ಲಿ ಮುಖ್ಯ ಅತಿಥಿ ಮತ್ತು ಪ್ರಸ್ತುತ ಸಾಹಿತ್ಯದ ಸ್ಥಿತಿ ಗತಿ ಕುರಿತು ಉಪನ್ಯಾಸ

3. ವೆಂಕಟೇಶ್ವರ ಶಾಲೆ - ಕನ್ನಡ ರಾಜ್ಯೋತ್ಸವ ಆಚರಣೆಯ ಮುಖ್ಯ ಅತಿಥಿ, ಕನ್ನಡ ನಾಡು ನುಡಿ ಕುರಿತು ಉಪನ್ಯಾಸ

4. ಮಹಾ ಪ್ರಕಾಶದ ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಟಿಯಲ್ಲಿ ಉದ್ಘಾಟನೆ ಮತ್ತು ಕನ್ನಡ ಸಾಹಿತ್ಯದ ಕುರಿತು ಉಪನ್ಯಾಸ.

5. ಪ್ರೇಮಗಂಗಾ ಹೆಲ್ಪ್ನಕೇರ್ ಮತ್ತು ಕಾವ್ಯಮಿತ್ರ ಪ್ರಕಾಶನದ ಪ್ರೇಮಾನುರಾಗ ಪುಸ್ತಕ ಬಿಡುಗಡೆಯಲ್ಲಿ ಅತಿಥಿ, ಮತ್ತು ಭಾಷಣ

6. ದಿನಾಂಕ 14-06-2019 ರ ಬೆಳಕು ಶೋಧ ಕಾರ್ಯಕ್ರಮದಲ್ಲಿ, ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡ ಕರ್ನಾಟಕದ ವೀರ ಸೈನಿಕ "ಲಾರೆನ್ಸ್ ಡಿಸೋಜ" ಕುರಿತಾದ ಪರಿಚಯಾತ್ಮಕ ಭಾಷಣ 

7. ದಿನಾಂಕ 01-11-2022, ವಿಶ್ವವಿದ್ಯಾಪೀಠ ಶಾಲೆ ಯಲಹಂಕದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕನ್ನಡ ನಾಡು ನಡಿಯ ಕುರಿತಾಗಿ ಉಪನ್ಯಾಸ. 

8. ದಿನಾಂಕ 21-11-2022 ಭಾವತರಂಗ ಸಾಹಿತ್ಯವೇದಿಕೆಯಲ್ಲಿ ಮುಖ್ಯ ಅತಿಥಿ, ಪುಸ್ತಕ ಬಿಡುಗಡೆ ಮತ್ತು ಪುಸ್ತಕ ಪರಿಚಯ ಭಾಷಣ 

ಟಿ.ವಿ ಕಾರ್ಯಕ್ರಮಗಳು 

1. ಶ್ರೀ ಬಸವ ಟಿವಿ ಸಾಹಿತ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ 20ಕ್ಕೂ  ಕಾರ್ಯಕ್ರಮಗಳು 

2. ಶ್ರೀ ಬಸವ ಟಿವಿಯಲ್ಲಿ ವಿರೂಪಕನಾಗಿ ಸಾಹಿತ್ಯ ಜಾಗೃತಿಯ 15 ಕ್ಕೂ ಹೆಚ್ಚು ಕಾರ್ಯಕ್ರಮಗಳು 

3. ಶ್ರೀ ಬಸವ ಟಿವಿಯಲ್ಲಿ "ಅನುಭವ ಗೋಷ್ಟಿ" ಯಲ್ಲಿ 100 ಕ್ಕೂ ಹೆಚ್ಚು ಕಾರ್ಯಕ್ರಮಗಳು ಭಾಗವಹಿಸಿದ್ದು 

2 comments:

  1. ಬಹಳ ದೊಡ್ಡ ಸಾದನೆಗೈದ ಪ್ರಕಾಶ್ ಜಿಂಗಾಡೆ ಸಾಹೇಬರಿಗೆ..ಶುಭವಾಗಲಿ...ಇನ್ನೂ ಅನೇಕ ಪ್ರಶಸ್ತಿಗಳು, ಸನ್ಮಾನಗಳು, ದೊರಕುವಂತಾಗಲಿ.

    ReplyDelete
  2. This comment has been removed by the author.

    ReplyDelete